ಮಂಗಳೂರು ವಿಶ್ವವಿದ್ಯಾನಿಲಯವು ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಕೊಣಾಜೆ ಗ್ರಾಮದಲ್ಲಿ ಸ್ಥಾಪಿತವಾಗಿದೆ. ಇದರ ಧ್ಯೇಯ ವಾಕ್ಯ "ಜ್ಞಾನವೇ ಬೆಳಕು". ಮಂಗಳಗಂಗೋತ್ರಿ ಎಂಬುದು ಈ ವಿ ವಿ ಯ ಕ್ಯಾಂಪಸ್ ನ ಹೆಸರು. ಇದು ಸುಮಾರು ೩೬೦ ಎಕರೆ ಪ್ರದೇಶದಲ್ಲಿ ವ್ಯಾಪಿಸಿದೆ. ಪ್ರಸ್ತುತ ದಕ್ಷಿಣ ಕನ್ನಡ, ಮತ್ತು ಉಡುಪಿ ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಈ ವಿಶ್ವವಿದ್ಯಾನಿಲಯದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ. == ಹಿನ್ನೆಲೆ == ಮೊದಲು ಇದು ಮೈಸೂರು ವಿಶ್ವವಿದ್ಯಾನಿಲಯದ ಸ್ನಾತಕೋತ್ತರ ಕೇಂದ್ರವಾಗಿತ್ತು. ೧೯೮೦ರಲ್ಲಿ ಸ್ವತಂತ್ರ ವಿಶ್ವವಿದ್ಯಾನಿಲಯವಾಗಿ ರೂಪುಗೊಂಡಿತು. ೨೦೨೩ರಲ್ಲಿ ಕೊಡಗು ವಿಶ್ವಾವಿದ್ಯಾನಿಲಯವು ರೂಪೀಕರಣಗೊಳ್ಳುವ ತನಕ ಕೊಡಗು ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಕಾಲೇಜುಗಳು ಕೂಡ ಮಂಗಳೂರು ವಿಶ್ವವಿದ್ಯಾನಿಲದ ಆಡಳಿತ ವ್ಯಾಪ್ತಿಗೆ ಒಳಪಟ್ಟಿತ್ತು. == ಕ್ಯಾಂಪಸ್/ಆವರಣ == ೬೫೦ ಎಕರೆ ಪ್ರದೇಶದಲ್ಲಿ ವಿಸ್ತಾರವನ್ನು ಹೊಂದಿದೆ. ಸುಂದರವಾದ ಹುಲ್ಲುಹಾಸಿನ ಆವರಣ. == ಸಂಯೋಜಿತ ಕಾಲೇಜುಗಳು == ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟ, ಮಂಗಳೂರು ಫೀಲ್ಡ್ ಮಾರ್ಷಲ್ ಕೆ ಎಂ ಕಾರ್ಯಪ್ಪ ಕಾಲೇಜು, ಮಡಿಕೇರಿ ಸ್ನಾತಕೋತ್ತರ ಅಧ್ಯಯನ ಕೇಂದ್ರ ಚಿಕ್ಕಅಳುವಾರ ಕುಶಾಲನಗರ ಕೊಡಗು. ಸ್ನಾತಕೋತ್ತರ ಅಧ್ಯಯನ ಕೇಂದ್ರ ಉಡುಪಿ. == ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು == == ವಿಭಾಗಗಳು == ಎಸ್.ವಿ.ಪಿ.ಕನ್ನಡ ಅಧ್ಯಯನ ಸಂಸ್ಥೆ ಮಂಗಳಗಂಗೋತ್ರಿ. == ಹೊರಗಿನ ಸಂಪರ್ಕಗಳು == ಅಧಿಕೃತ ಸಂಪರ್ಕ ತಾಣ ಕನ್ನಡದಲ್ಲಿ ಅಧಿಕೃತ ಸಂಪರ್ಕ ತಾಣ 2007-02-12 ವೇಬ್ಯಾಕ್ ಮೆಷಿನ್ ನಲ್ಲಿ.